Pages

Thursday, July 10, 2014

ಭಿನ್ನ ಸಮಸ್ಯೆಗೆ ಬಲಿಯಾಗಿರುವ ಜಗತ್ತು

ಬಹುಶಃ ಕಳೆದ ೫೦ ವರ್ಷಗಳಿಂದ ಇಡೀ ಜಗತ್ತನ್ನು ಇಷ್ಟೊಂದು ಚಿಂತೆಗೆ ಈಡುಮಾಡಿರುವ ವಿಚಾರ ಮತ್ತೊಂದಿಲ್ಲ. ಗಾಬರಿ ಹುಟ್ಟಿಸುವ ವೇಗದಲ್ಲಿ ಹೆಚ್ಚುತ್ತಿರುವ ಜನನ ಪ್ರಮಾಣ, ಪರಿಣಾಮವಾಗಿ ಉಂಟಾಗಿರುವ ಸಾಮಾಜಿಕ-ಆರ್ಥಿಕ ಸಮಸ್ಯೆಗಳು ಇಡೀ ಜೀವ ಜಗತ್ತಿಗೆ ಆತಂಕವೊಡ್ಡಿವೆ. ಅಮೆರಿಕದ ಜನಗಣತಿ ಮಂಡಳಿಯ (ಯುಎಸ್‌ಸಿಬಿ) ಲೆಕ್ಕಾಚಾರದಂತೆ ಜಾಗತಿಕ ಮಟ್ಟದಲ್ಲಿ ೨೦೧೨ರ ಮಾರ್ಚ್ ೧೨ಕ್ಕೆ ಸರಿ ಹೊಂದುವಂತೆ ಜನಸಂಖ್ಯೆ ೭ ಬಿಲಿಯನ್ ದಾಟಿದೆ. ಈ ಹಿನ್ನೆಲೆಯಲ್ಲಿ ಚೀನಾ ಮತ್ತು ಭಾರತ ಜನಸಂಖ್ಯಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪ್ರಖರವಾದ ಪ್ರಯತ್ನ ನಡೆಸುತ್ತಿದ್ದರೆ, ಇನ್ನೊಂದೆಡೆ ಕೆಲವು ದೇಶಗಳು ಜನಸಂಖ್ಯೆ ಇಳಿಮುಖವಾಗುತ್ತಿರುವುದರ ಬಗ್ಗೆ ಚಿಂತಾಕ್ರಾಂತವಾಗಿವೆ.
 ಸಂತಾನ ನಿಯಂತ್ರಣಕ್ಕಾಗಿ ವಿಧ ವಿಧದ ತಂತ್ರಜ್ಞಾನಗಳು ಪ್ರಾಚೀನ ಈಜಿಪ್ಟ್, ಗ್ರೀಸ್ ಮತ್ತು ರೋಮ್‌ಗಳಲ್ಲೇ ಇದ್ದವು. ಆದರೆ ಇದು ಅತ್ಯಂತ ವಿಸ್ತೃತ ಸ್ವರೂಪ ಪಡೆದದ್ದು ಪ್ರಖ್ಯಾತ ಆಂಗ್ಲ ಅರ್ಥಶಾಸ್ತ್ರಜ್ಞ ಥಾಮಸ್ ರಾಬರ್ಟ್ ಮಾಲ್ತೂಸ್ ಅವರಿಂದ. ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ಸಮಸ್ಯೆಗಳಾದ ಆಹಾರ ಕೊರತೆ, ನಿರುದ್ಯೋಗ ಮತ್ತು ಸೂಕ್ತ ಆರೋಗ್ಯ ಸೌಲಭ್ಯಗಳ ಕೊರತೆಯ ಬಗ್ಗೆ ಅವರು ಜಗತ್ತಿನ ಗಮನ ಸೆಳೆದಿದ್ದರು. ಪರಿಣಾಮವಾಗಿ ೧೯೭೦ರ ದಶಕದಲ್ಲಿ ಅಮೆರಿಕ ಮತ್ತು ಇಂಗ್ಲೆಂಡ್‌ಗಳಲ್ಲಿ ಗರ್ಭ ನಿರೋಧಕ್ಕೆ ಸಾಧನಗಳು ದೊರಕಲು ಆರಂಭಿಸಿದವು. ನಂತರ ಸೆಪ್ಟೆಂಬರ್ ೨೬ರಂದು ವಿಶ್ವ ಸಂತಾನ ನಿಯಂತ್ರಣ ದಿನ ಆಚರಿಸುವ ಮೂಲಕ ಜಾಗೃತಿ ಮೂಡಿಸಲಾಯಿತು. 
ಜನಸಂಖ್ಯಾ ಶಿಫಾರಸು ಮಂಡಳಿಯ ೨೦೦೧ರ ವಿಶ್ವ ಜನಸಂಖ್ಯಾ ಅಂಕಿಅಂಶದ ಪ್ರಕಾರ ೬೫ ದೇಶಗಳ  ಒಟ್ಟು ಜನನದ ಸಂಖ್ಯೆ ಮಹಿಳೆಯೊಬ್ಬಳಿಗೆ ೨.೧ ಮಕ್ಕಳಿಗಿಂತ ಕೆಳಗಿಳಿದಿದೆ ಎನ್ನುವುದು ಆತಂಕಕಾರಿ. ಸಿಂಗಾಪುರದಲ್ಲೂ ಈ ಜನನ ಸಂಖ್ಯೆ ಇನ್ನಿಲ್ಲದಂತೆ ಕಡಿಮೆಯಾಗುತ್ತಿದೆ. ೨೦೦೯ರಲ್ಲಿ ೧.೨೨ ಇದ್ದ ಪ್ರಮಾಣ ೨೦೧೦ಕ್ಕೆ ಬರುತ್ತಿದ್ದಂತೆ ಇನ್ನಷ್ಟು ಕಡಿಮೆ ಅಂದರೆ ೧.೧೬ಕ್ಕೆ ಇಳಿದಿದೆ. 
ಆದರೆ ಸಿಐಎ ‘ವರ್ಲ್ಡ್ ಫ್ಯಾಕ್ಟ್ ಬುಕ್’ನಲ್ಲಿ ಈ ದೇಶವನ್ನು ೨೨೨ ದೇಶಗಳಲ್ಲಿ ಕೊನೆಯ ಸಾಲಿಗೆ ಸೇರಿಸಿದ್ದಲ್ಲದೆ, ಜನನ ಪ್ರಮಾಣ ೦.೭೮ರಷ್ಟು ಮಾತ್ರ ಇದೆ ಎಂದಿದ್ದು ಇನ್ನಷ್ಟು ಆತಂಕಕ್ಕೆ ಕಾರಣ. ಇನ್ನೊಂದೆಡೆ ಚೀನಾ ಒಂದೇ ಮಗುವಿನ ನೀತಿ ರೂಪಿಸುವ ಮೂಲಕ ಜನಸಂಖ್ಯೆ ನಿಯಂತ್ರಣಕ್ಕೆ ಇನ್ನಿಲ್ಲದ ಸಾಹಸ ಪಡುತ್ತಿದೆ. ಭಾರತದಲ್ಲಿ ‘ನಾವಿಬ್ಬರು, ನಮಗಿಬ್ಬರು’, ’ಆರತಿಗೊಂದು ಕೀರ್ತಿಗೊಂದು’ ಎಂಬಿತ್ಯಾದಿ ಘೋಷವಾಕ್ಯಗಳು ಕುಟುಂಬ ಯೋಜನೆಯ ಬೀಜ ಮಂತ್ರಗಳಾಗಿವೆ.
 ಇಡೀ ಜಗತ್ತು ಜನಸಂಖ್ಯಾ ಹೆಚ್ಚಳದ ಸಮಸ್ಯೆಗೆ ತುತ್ತಾಗಿದೆ ಎಂದ ಮೇಲೆ ಕಡಿಮೆ ಜನಸಂಖ್ಯೆಯ ಬಗ್ಗೆ ಯಾಕೆ ಅಷ್ಟೊಂದು ತಲೆಕೆಡಿಸಿಕೊಳ್ಳಬೇಕು? ಹಾಗೆ ನೋಡಿದರೆ ಇಡೀ ಜಗತ್ತಿನ ಅರ್ಥವ್ಯವಸ್ಥೆಯ ಹಿನ್ನೆಲೆಯಲ್ಲಿ ವಿಶ್ಲೇಷಿಸಿದರೆ ಕಡಿಮೆ ಜನಸಂಖ್ಯೆ ಒಳ್ಳೆಯದೇ. ಆದರೆ ಕಡಿಮೆ ಜನಸಂಖ್ಯೆ ಹೊಂದಿರುವುದು ಆಯಾ ದೇಶಕ್ಕೆ ಸಮಸ್ಯೆ ಹೌದು. ಏಕೆಂದರೆ ಉದ್ಯೋಗಿಗಳ ಸಂಖ್ಯೆ ಕಡಿಮೆಯಾಗುತ್ತದೆ ಮತ್ತು ಆ ಮೂಲಕ ತೆರಿಗೆ ಸಂಗ್ರಹ ಕಡಿಮೆಯಾಗುತ್ತದೆ. ಇದೇ ಪರಿಸ್ಥಿತಿ ಮುಂದುವರಿದದ್ದೇ ಹೌದಾದಲ್ಲಿ ಇಟಲಿ ಮತ್ತು ಜರ್ಮನಿಯಲ್ಲಿ ಉದ್ಯೋಗಿಗಳ ಸಂಖ್ಯೆ ೧೯೯೯ರಿಂದ ೨೦೫೦ಕ್ಕೆ ಕ್ರಮವಾಗಿ ೨೩ ಮಿಲಿಯನ್‌ನಿಂದ ೧೪ ಮಿಲಿಯನ್‌ಗೆ ಮತ್ತು ೪೧ ಮಿಲಿಯನ್‌ನಿಂದ ೨೮ ಮಿಲಿಯನ್‌ಗೆ ಇಳಿಯಲಿದೆ. ಹಾಗಾಗಿ, ಸಂತಾನ ನಿಯಂತ್ರಣ ಅಥವಾ ಉತ್ತೇಜನ ಕಾರ್ಯಗಳೆರಡೂ ಸಮತೋಲಿತವಾಗಿ ಮತ್ತು ಆ ಮೂಲಕ ಜಾಗತಿಕ ಜನಸಂಖ್ಯೆ ಹೆಚ್ಚದ ರೀತಿಯಲ್ಲಿ ನಡೆಯಬೇಕಾದದ್ದು ಸದ್ಯದ ಅಗತ್ಯ. 


--ಸಂಗ್ರಹ

ಪ್ರಮುಖ ರಾಷ್ಟ್ರೀಯ &ಅಂತರಾಷ್ಟ್ರೀಯ ದಿನಾಚರಣೆಗಳು



ಸಾಮಾನ್ಯ ಜ್ಞಾನ
ಪ್ರಮುಖ ರಾಷ್ಟ್ರೀಯ &ಅಂತರಾಷ್ಟ್ರೀಯ ದಿನಾಚರಣೆಗಳು
ಕ್ರ.ಸಂ
ತಿಂಗಳು
ದಿನಾಂಕ
ಆಚರಣೆ
1
ಜನವರಿ
01
ವಿಶ್ವ ಶಾಂತಿ ದಿನ
2
02
ವಿಶ್ವ ನಗುವಿನ ದಿನ
3
12
ರಾಷ್ಟ್ರೀಯ ಯುವ ದಿನ/ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ
4
15
ಸೇನಾ ದಿನಾಚರಣೆ
5
25
ಅಂತರಾಷ್ಟ್ರೀಯ ತೆರಿಗೆ ದಿನ
6
26
ಗಣರಾಜ್ಯೋತ್ಸವ ದಿನ
7
28
ಸರ್ವೋಚ್ಚ ನ್ಯಾಯಾಲಯ ದಿನ
8
30
ಸರ್ವೋದಯ ದಿನ/ಹುತಾತ್ಮರ ದಿನ/ಕುಷ್ಠರೋಗ ನಿವಾರಣಾ ದಿನ
9
ಫೆಬ್ರುವರಿ
07
ವಿಶ್ವ ಆರೋಗ್ಯ ದಿನಾಚರಣೆ
10
21
ವಿಶ್ವ ಮಾತೃಭಾಷಾ ದಿನ
11
22
ಸ್ಕೌಟ್ & ಗೈಡ್ ದಿನ
12
23
ವಿಶ್ವ ಹವಾಮಾನ ದಿನ
13
24
ರಾಷ್ಟ್ರೀಯ ಸುಂಕದ ದಿನ
14
28
ರಾಷ್ಟ್ರೀಯ ವಿಜ್ಞಾನ ದಿನಾಚರಣೆ
15
ಮಾರ್ಚ್
08
ಅಂತರಾಷ್ಟ್ರೀಯ ಮಹಿಳಾ ದಿನ
16
12
ದಂಡಿ ಸತ್ಯಾಗ್ರಹ ದಿನ
17
15
ವಿಶ್ವ ಬಳಕೆದಾರರ ದಿನ
18
16
ವಿಶ್ವ ಅಂಗವಿಕಲರ ದಿನ
19
18
ವಿಶ್ವ ಪರಂಪರೆ ದಿನ
20
21
ವಿಶ್ವ ಅರಣ್ಯ ದಿನ
21
22
ವಿಶ್ವ ಜಲ ನಿಧಿ
22
23
ವಿಶ್ವ ವಾತಾವರಣ ದಿನ
23
27
ವಿಶ್ವ ರಂಗಭೂಮಿ ದಿನ

24
ಏಪ್ರಿಲ್
01
ವಿಶ್ವ ಅಂಧತ್ವ ದಿನ/ಮೂರ್ಖರ ದಿನ
25
02
ರಾಷ್ಟ್ರೀಯ ನಾವಿಕರ ದಿನ
26
05
ರಾಷ್ಟ್ರೀಯ ಸಾಗರ ಯಾನ ದಿನ
27
07
ವಿಶ್ವ ಆರೋಗ್ಯ ದಿನ
28
12
ವಿಶ್ವ ಬಾಹ್ಯಾಕಾಶ ದಿನ
29
14
ಡಾ.ಅಂಬೇಡ್ಕರ್ ಜಯಂತಿ/ಅಗ್ನಿಶಾಮಕ ದಿನ
30
18
ವಿಶ್ವ ಪರಂಪರೆ/ಸಂಸ್ಕೃತಿ ದಿನ
31
22
ವಿಶ್ವ ಭೂ ದಿನ
32
23
ವಿಶ್ವ ಪುಸ್ತಕ ದಿನ
33
ಮೇ
01
ಕಾರ್ಮಿಕರ ದಿನ
34


02
ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ
35


05
ರಾಷ್ಟ್ರೀಯ ಶ್ರಮಿಕರ ದಿನ
36


08
ಅಂತರಾಷ್ಟ್ರೀಯ ರೆಡ್ ಕ್ರಾಸ್ ದಿನ/ವಿಶ್ವ ಮಾತೆಯರ ದಿನ
37


11
ರಾಷ್ಟ್ರೀಯ ತಂತ್ರಜ್ಞಾನ ದಿನ
38


14
ವಿಶ್ವ ಮಾತೃ ದಿನ
39


15
ಅಂತರಾಷ್ಟ್ರೀಯ ಕುಟುಂಬ ದಿನ
40


17
ವಿಶ್ವ ದೂರಸಂಪರ್ಕ ದಿನ
41


21
ಭಯೋತ್ಪಾದಕ ವಿರೋಧಿ ದಿನ
42


24
ಕಾಮನ್ ವೆಲ್ತ್ ದಿನ
43


31
ವಿಶ್ವ ತಂಬಾಕು ತಾಜ್ಯ ದಿನ
44
ಜೂನ್
05
ವಿಶ್ವ ಪರಿಸರ ದಿನ
45
12
ಬಾಲ ಕಾರ್ಮಿಕ ವಿರೋಧಿ ದಿನ
46
14
ವಿಶ್ವ ರಕ್ತ ದಾನಿಗಳ ದಿನ
47
18
ವಿಶ್ವ ಅಪ್ಪಂದಿರ ದಿನ
48
21
ವಿಶ್ವ ಮಕ್ಕಳ ಹಕ್ಕು ದಿನ
49
26
ವಿಶ್ವ ಮಧುಮೇಹಿ ದಿನ/ಔಷಧ ದುರ್ಬಳಕೆ ವಿರೋಧಿ ದಿನ
ಅಂತರಾಷ್ಟ್ರೀಯ ಮಾದಕ ವಸ್ತು ನಿಷೇಧ ದಿನ
50
ಜುಲೈ
01
ರಾಷ್ಟ್ರೀಯ ವೈದ್ಯರ ದಿನ
51
11
ವಿಶ್ವ ಜನಸಂಖ್ಯಾ ದಿನ
52
ಅಗಸ್ಟ್
06
ಹಿರೋಶಿಮಾ ದಿನಾಚರಣೆ
ವಿಶ್ವ ಸ್ನೇಹ ದಿನ
53
09
ಕ್ವಿಟ್ ಇಂಡಿಯಾ ದಿನಾಚರಣೆ
ನಾಗಾಸಾಕಿ ದಿನಾಚರಣೆ
54
15
ಸ್ವಾತಂತ್ರ್ಯ ದಿನಾಚರಣೆ
55
16
ಮಹಿಳಾ ಸಮಾನತೆ ದಿನ
56
29
ರಾಷ್ಟ್ರೀಯ ಕ್ರೀಡಾ ದಿನ
57
ಸೆಪ್ಟೆಂಬರ್
05
ಶಿಕ್ಷಕರ ದಿನಾಚರಣೆ
58
08
ವಿಶ್ವ ಸಾಕ್ಷರತಾ ದಿನಾಚರಣೆ
59
10
ಮಾನವತಾ ಹಕ್ಕುಗಳ ದಿನ
60
14
ಹಿಂದಿ ದಿನ
61
15
ಅಭಿಯಂತರರ ದಿನಾಚರಣೆ(ಸರ್.ಎಮ್.ವಿಶ್ವೇಶ್ವರಯ್ಯ ನವರ ಜನ್ಮ ದಿನ)
62
16
ವಿಶ್ವ ಓಜೋನ್ ದಿನ
63
21
ಅಂತರಾಷ್ಟ್ರೀಯ ಶಾಂತಿ ದಿನ
64
22
ರಾಷ್ಟ್ರೀಯ ಗುಲಾಬಿ ದಿನ
65
25
ವಿಶ್ವ ಹೃದಯ ದಿನ
66
27
ವಿಶ್ವ ಶ್ರವಣ ಮಾಂದ್ಯರ ದಿನ
ವಿಶ್ವ ಪ್ರವಾಸೋದ್ಯಮ ದಿನ
67
ಅಕ್ಟೋಬರ್
01
ಅಂತರಾಷ್ಟ್ರಿಯ ವೃದ್ಯಾಪ್ಯರ ದಿನ
68
02
ಗಾಂಧೀ ಜಯಂತಿ
ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ
ವಿಶ್ವ ವಸತಿ ದಿನ
ಅಂತರಾಷ್ಟ್ರೀಯ ಅಹಿಂಸಾ ದಿನ
69
03
ವಿಶ್ವ ಪಕೃತಿ ದಿನ
70
04
ವಿಶ್ವ ಪ್ರಾಣಿ ಕಲ್ಯಾಣ ದಿನ
71
05
ವಿಶ್ವ ಶಿಕ್ಷಕರ ದಿನಾಚರಣೆ
72
08
ವಾಯು ದಳ ದಿನಾಚರಣೆ
73
ಅಕ್ಟೋಬರ್
09
ವಿಶ್ವ ಅಂಚೆ ದಿನ
74
10
ವಿಶ್ವ ಮಾನಸಿಕ ಆರೋಗ್ಯ ದಿನ
ಅಂಧರ ಮಾರ್ಗದರ್ಶನ ದಿನ
75
12
ವಿಶ್ವ ಅರ್ಥರೈಟಾಸ್ ದಿನ
76
13
ವಿಶ್ವ ಪಾಕೃತಿಕ ವಿಕೋಪ ಮುಂಜಾಗರುಕತಾ ದಿನ
77
17
ವಿಶ್ವ ಆಹಾರ ದಿನ
78
24
ವಿಶ್ವ ಸಂಸ್ಥೆ ಯ ದಿನಾಚರಣೆ
79
30
ವಿಶ್ವ ಉಳಿತಾಯ ದಿನ
80
31
ರಾಷ್ಟ್ರೀಯ ಏಕತಾ ದಿನ
81
ನವೆಂಬರ್
01
ಕನ್ನಡ ರಾಜ್ಯೋತ್ಸವ ದಿನ
82
09
ಕಾನೂನು ಸೇವಾದಿನ
83
13
ರಾಷ್ಟ್ರೀಯ ವಿಪತ್ತು ಕಡಿಮೆಗೊಳಿಸುವ ದಿನ
84
14
ಮಕ್ಕಳ ದಿನಾಚರಣೆ
85
29
ಅಂತರಾಷ್ಟ್ರೀಯ ಸಾಮರಸ್ಯ ದಿನಾಚರಣೆ
86
ಡಿಸೆಂಬರ್
01
ವಿಶ್ವ ಏಡ್ಸ್ ದಿನಾಚರಣೆ
87
02
ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನಾಚರಣೆ
88
03
ವಿಶ್ವ ಅಂಗವಿಕಲರ ದಿನ
89
04
ನೌಕಾದಳ ಧ್ವಜ ದಿನ
90
07
ಧ್ವಜ ದಿನಾಚರಣೆ
91
10
ವಿಶ್ವ ಮಾನವ ಹಕ್ಕುಗಳ ದಿನಾಚರಣೆ
92
17
ನಿವೃತ್ತಿಗರ ಹಕ್ಕುದಿನ
93
23
ರೈತ ದಿನ